ಅರಕಾನ್‍ಯೋಮ
	ಆಲ್ಪೈನ್ ಶ್ರೇಣಿಯಷ್ಟೇ ಹಳೆಯ ಪರ್ವತಪಂಕ್ತಿ. ಬರ್ಮ-ಭಾರತಗಳ ಮಧ್ಯದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿದೆ. ತಳದ ಕಿಬ್ಬೆಟ್ಟಗಳು ಬಂಗಾಳಕೊಲ್ಲಿಯವರೆಗೂ ಚಾಚಿವೆ. ಮಧ್ಯಭಾಗ ಸ್ಫಟಿಕಶಿಲೆಯಿಂದಾಗಿದೆ. ಎರಡೂ ಪಾಶ್ರ್ವಗಳಲ್ಲಿ ಮೂರನೆಯ ಭೂಯುಗದ ಪದರಪದರವಾಗಿರುವ ಮಡ್ಡಿ ಬಂಡೆಗಳಿವೆ. ಕೆಲವು ಶಿಖರಗಳು (3,000) ಮೀ. ಗಿಂತ ಹೆಚ್ಚು ಎತ್ತರವಾಗಿವೆ. ಸರಾಸರಿ ಎತ್ತರ (2,000) ಮೀ. ಕ್ರೊಮೈಟ್ ಮತ್ತು ಇತರ ಖನಿಜಗಳು ದೊರಕುತ್ತವೆಯಾದರೂ ಅವನ್ನು ತೆಗೆಯಲಾಗಿಲ್ಲ. ಮಳೆಯನ್ನು ಹೊತ್ತು ತರುವ ಮಾರುತಗಳಿಗೆ ಈ ಬೆಟ್ಟಗಳು ಅಡ್ಡಲಾಗಿರುವುದರಿಂದ-ಒಂದು ಪಾಶ್ರ್ವದಲ್ಲಿ (80") ಮಳೆಯಾಗುತ್ತದೆ. ಅಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಿವೆ. ವ್ಯವಸಾಯ ಜನರ ಮುಖ್ಯವೃತ್ತಿ.          

(ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ